ಬ್ರೂನೋ ಕುಟಿನ್ಹೊ (ಜನನ ೬ ಅಕ್ಟೋಬರ್ ೧೯೬೯) ಇವರು ಗೋವಾ ಮೂಲದ ಭಾರತೀಯ ಫುಟ್ಬಾಲ್ ಆಟಗಾರ. ಅವರು ತಮ್ಮ ಕ್ಲಬ್ ವೃತ್ತಿಜೀವನದ ಹೆಚ್ಚಿನ ಭಾಗವನ್ನು ಸಾಲ್ಗೋಕರ್‌ನಲ್ಲಿ ಕಳೆದರು. ಕುಟಿನ್ಹೊರವರು ೨೦೦೧ ರಲ್ಲಿ ಅರ್ಜುನ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದು ಅವರ ಕ್ರೀಡೆಯಲ್ಲಿನ ಶ್ರೇಷ್ಠತೆಗಾಗಿ ನೀಡಲಾಗಿದೆ. == ವೈಯಕ್ತಿಕ ಜೀವನ == ಕುಟಿನ್ಹೊರವರು ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಹಾಗೂ ಇವರ ಸಹೋದರ ಜೆರೊನಿಮೊ ಕುಟಿನ್ಹೊರವರು ಗೋವಾದಲ್ಲಿ ಜೆ ೨೯ ಎಂಬ ಸ್ಪೋರ್ಟ್ಸ್ ಬಾರ್ ನಡೆಸುತ್ತಿದ್ದಾರೆ. == ಭಾರತದ ಮಾಜಿ ನಾಯಕ == ಕುಟಿನ್ಹೊರವರು ಮಾಂಟೆ ಡಿ ಗುರಿಮ್‌ನಲ್ಲಿ ಅಧ್ಯಯನ ಮಾಡಿದರು. ಅವರನ್ನು ತರಬೇತುದಾರರಾದ ಪಾಲ್ ರಾಜ್ರವರು ಗುರುತಿಸಿದರು. ಅವರು ತಮ್ಮ ಮೊದಲ ಪಂದ್ಯವನ್ನು ಶಾಲಾ ಪ್ರತಿಸ್ಪರ್ಧಿಗಳಾದ ಎಸ್‌ಟಿ ಪಿಲಾರ್ ವಿರುದ್ಧ ಆಡಿದರು. ಪಿಲಾರ್, ೩ ಗೋಲುಗಳನ್ನು ಗಳಿಸಿದರು ಹಾಗೂ ಸುಬ್ರತೋ ಮುಖರ್ಜಿ ಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ಅಂಡರ್ ೧೭ ನಲ್ಲಿ ಗೆದ್ದರು. ಕುಟಿನ್ಹೊ ಅವರು ಭಾರತದ ಮಾಜಿ ಫುಟ್ಬಾಲ್ ನಾಯಕರೂ ಆಗಿದ್ದರು. ಅವರ ಬಹುನಿರೀಕ್ಷಿತ ವೃತ್ತಿಜೀವನವು ಸುಮಾರು ಒಂದೂವರೆ ದಶಕದವರೆಗೆ ವ್ಯಾಪಿಸಿದೆ. ೧೯೮೭ ರಲ್ಲಿ ಬ್ರೂನಿಯಲ್ಲಿ ನಡೆದ ಶಾಲಾ ಪಂದ್ಯಾವಳಿಯಲ್ಲಿ ಅವರು ಮೊದಲ ಬಾರಿಗೆ ಭಾರತಕ್ಕಾಗಿ ಆಡಿದರು. ೧೯೮೮ ರಲ್ಲಿ ಗೋವಾದ ಪ್ರಮುಖ ತಂಡ ಡೆಂಪೊ ಎಸ್‌ಸಿಗೆ ಸೇರಿದ ಅವರು ೧೯೮೭ ರಲ್ಲಿ ಮತ್ತೊಂದು ಪ್ರಮುಖ ಗಣಿಗಾರಿಕೆ-ಸಂಬಂಧಿತ ಸಾಲ್ಗೋಕರ್ ತಂಡಕ್ಕೆ ತೆರಳಿದರು. == ಸಣ್ಣ ಸ್ಟ್ರೈಕರ್ == ಕುಟಿನ್ಹೊ ಅವರನ್ನು "ಸಣ್ಣ ಸ್ಟ್ರೈಕರ್" ಎಂದು ಕರೆಯಲಾಗುತ್ತದೆ. ೧೯೮೯-೯೦ ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಟೀಮ್‌ಗೆ ಪಾದಾರ್ಪಣೆ ಮಾಡಿದ ಅವರು, ೨೦೦೧ ರ ಮಿಲೇನಿಯಂ ಕಪ್‌ನಲ್ಲಿ ಕೊನೆಯ ಪಂದ್ಯವನ್ನಾಡಿದ್ದರು. ೧೯೮೭ ರಲ್ಲಿ ಫೆಡರೇಶನ್ ಕಪ್, ೧೯೮೯ ಮತ್ತು ೧೯೯೬ ರಲ್ಲಿ ರೋವರ್ಸ್ ಕಪ್, ೯೮೯ ರಲ್ಲಿ ಟಾಕಾ ಗೋವಾ ಮತ್ತು ೧೯೯೮ ರಲ್ಲಿ ಭಾರತದಲ್ಲಿ ನಡೆದ ರಾಷ್ಟ್ರೀಯ ಫುಟ್ಬಾಲ್ ಲೀಗ್ ಅನ್ನು ಗೆಲ್ಲಲು ಸಾಲ್ಗೋಕರ್ ಅವರಿಗೆ ಸಹಾಯ ಮಾಡಿದ ಕೀರ್ತಿ ಬ್ರೂನೋರವರಿಗೆ ಸಲ್ಲುತ್ತದೆ. == ಭಾರತವನ್ನು ಪ್ರತಿನಿಧಿಸುವುದು ಹಾಗೂ ಮುನ್ನಡೆಸುವುದು == ೧೯೮೯ ರಲ್ಲಿ ಢಾಕಾದಲ್ಲಿ ನಡೆದ ಪ್ರೆಸಿಡೆಂಟ್ಸ್ ಕಪ್‌ನಲ್ಲಿ ಕುಟಿನ್ಹೊ ಅವರು ಭಾರತವನ್ನು ಪ್ರತಿನಿಧಿಸಿದ್ದು, ೧೯೯೧ ರ ಪ್ರಿ-ಒಲಿಂಪಿಕ್ಸ್‌ಗೆ ಭಾರತದ ಅಂಡರ್-೨೩ ತಂಡವನ್ನು ಮುನ್ನಡೆಸಿದ್ದು, ೧೯೯೫ ಮತ್ತು ೧೯೯೬ ರಲ್ಲಿ ಸೌತ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಹಾಗೂ ಮಲೇಶಿಯದಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ಭಾರತವನ್ನು ಮುನ್ನಡೆಸಿದ್ದರು. ಕುಟಿನ್ಹೊರವರು ೧೯೯೬ ರಲ್ಲಿ ಗೋವಾದ ಸಾಲ್ಗೋಕರ್ ಸ್ಪೋರ್ಟ್ಸ್ ಕ್ಲಬ್ ಪರ ಆಡಿದಾಗ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ವರ್ಷದ ಆಟಗಾರ ಆಗಿದ್ದರು. == ವರ್ಗಾವಣೆ == ಆಗಸ್ಟ್ ೨೦೦೨ರಲ್ಲಿ ಕುಟಿನ್ಹೊರವರು ತನ್ನ ಕ್ಲಬ್‌ಗಳಾದ ಗೋವಾದಲ್ಲಿನ ಸಾಲ್ಗೋಕರ್ ಸ್ಪೋರ್ಟ್ಸ್ ಕ್ಲಬ್ ನಿಂದ ವಾಸ್ಕೋ ಸ್ಪೋರ್ಟ್ಸ್ ಕ್ಲಬ್ ಗೆ ವರ್ಗಾವಣೆಯಾಗುತ್ತಿದ್ದಾರೆ ಎಂದು ವರದಿಯಾಯಿತು. ಹಾಗೂ ಇವರು ೨೦೦೩ ರಲ್ಲಿ ಕೋಚ್ ಆದರು. == ಗೌರವಗಳು == ಭಾರತ ಸ್ಟಾಫ್ ಚಾಂಪಿಯನ್ ಶಿಪ್: ೧೯೯೭, ೧೯೯೯, ರನ್ನರ್ ಅಪ್: ೧೯೯೫ ದಕ್ಷಿಣ ಏಷ್ಯಾ ಕ್ರೀಡಾಕೂಟ ಚಿನ್ನದ ಪದಕ: ೧೯೯೫, ಕಂಚಿನ ಪದಕ: ೧೯೯೯ ಸಾಲ್ಗೋಕರ್ ಫೆಡರೇಶನ್ ಕಪ್: ೧೯೯೭ ವ್ಯಕ್ತಿ ಎಐಎಫ್ಎಫ್ ವರ್ಷದ ಆಟಗಾರ: ೧೯೯೬ ಅರ್ಜುನ ಪ್ರಶಸ್ತಿ: ೨೦೦೧ == ಬಾಹ್ಯ ಕೊಂಡಿಗಳು == ? 2002 == ಉಲ್ಲೇಖಗಳು ==